ಚಿರತೆಯೊಡನೆ ಸೆಣಸಿ ತನ್ನ ತಾಯಿ ಪ್ರಾಣ ಕಾಪಾಡಿದ ಯುವಕ: ಡಿ.ಕೆ ಶಿವಕುಮಾರ್ ಪ್ರಶಂಸೆ.. ಬೆಂಗಳೂರು,ಫೆಬ್ರವರಿ,24,2021(..):ತನ್ನ ತಾಯಿ ಮೇಲೆ ಎರಗಿದ ಚಿರತೆಯೊಂದಿಗೆ ಸೆಣಸಿ ತಾಯಿಯ ಪ್ರಾಣ ಕಾಪಾಡಿದ ಹಾಸನದ ಕಿರಣ್ ಶೌರ್ಯವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶ್ಲಾಘಿಸಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿಯಲ್ಲಿ ಕಿರಣ್ ತನ್ನ ತಾಯಿ ಜತೆ ಜಮೀನಿಗೆ ತೆರಳುತ್ತಿದ್ದ ವೇಳೆ ತಾಯಿಯ ಮೇಲೆ ಚಿರತೆ ದಾಳಿ ಮಾಡಿತ್ತು. ಈ ವೇಳೆ ಯುವಕ ಕಿರಣ್ ಚಿರತೆಯೊಂದಿಗೆ ಸೆಣಸಾಡಿ ತನ್ನ ತಾಯಿಯ ಪ್ರಾಣವನ್ನ ಉಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತಾಯಿ ಪ್ರಾಣ ಕಾಪಾಡಲು ಚಿರತೆಯೊಡನೆ ಸೆಣಸಿ ಕೊಂದ ಅರಸೀಕೆರೆಯ ಕಿರಣ್ ನ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿ-ಮಗನನ್ನು ಭೇಟಿಯಾಗುವಂತೆ ಹಾಸನ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ಅವರ ಚಿಕಿತ್ಸೆಗೆ 25,000 ರೂ ಹಣವನ್ನೂ ತಲುಪಿಸಲಿದ್ದೇನೆ ಎಂದು ಹೇಳಿದ್ದಾರೆ. : - - –- -- --