ಪಾಲಿಕೆ ಮೇಯರ್ ಚುನಾವಣೆ : ಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್ ಮೈಸೂರು,ಫೆಬ್ರವರಿ,23,2021(..) :ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆ ಅರ್ಜಿ‌ ಸಂಬಂಧ ರಾಜ್ಯ ಸರ್ಕಾರಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಿದಕ್ಕೆ ಪಾಲಿಕೆ ಸದಸ್ಯ ಸಮಿವುಲ್ಲಾ ಸಲ್ಲಿಸಿರುವ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಎಸ್.ಜಿ.ಪಂಡಿತ್ ಏಕಸದಸ್ಯ ಪೀಠ. ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ. 2020ರಲ್ಲಿ ಬಿಸಿಎ-ಮಹಿಳೆ ಇತ್ತು. ಈಗ ಸಾಮಾನ್ಯ-ಮಹಿಳೆ ನಿಗದಿಪಡಿಸಲಾಗಿದೆ. ಇದು ಕಾನೂನು ಬಾಹಿರ 2018 ರಿಂದ ಸತತವಾಗಿ ಮೇಯರ್ ಸ್ಥಾನವನ್ನು ಮಹಿಳೆಗೆ ನೀಡಲಾಗುತ್ತಿದೆ. 2018ರ ಜ.24ರಿಂದ ನ.17ರವರೆಗೆ ಎಸ್​ಸಿ-ಮಹಿಳೆ, ಸಾಮಾನ್ಯ-ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. 2020ರಲ್ಲಿ ಬಿಸಿಎ-ಮಹಿಳೆ ಇತ್ತು. ಈಗ ಸಾಮಾನ್ಯ-ಮಹಿಳೆ ನಿಗದಿಪಡಿಸಲಾಗಿದೆ. ಇದು ಕಾನೂನು ಬಾಹಿರ ಎನ್ನಲಾಗಿದೆ. ನಾಳೆ (ಫೆ.24) ಚುನಾವಣೆ, ಎಲ್ಲರ ಚಿತ್ತ ಹೈಕೋರ್ಟ್ ನತ್ತ ಸರ್ಕಾರದ ಅಧಿಸೂಚನೆ ರದ್ದುಪಡಿಸಿ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲು ಕೋರಲಾಗಿದೆ. ನಾಳೆ (ಫೆ.24)ನಡೆಯಬೇಕಿರುವ ಚುನಾವಣೆ ಹಿನ್ನೆಲೆ, ಎಲ್ಲರ ಚಿತ್ತ ಹೈಕೋರ್ಟ್ ನತ್ತ ಎನ್ನುವಂತ್ತಾಗಿದೆ. : ---- -