ಸಂಘಜನ ಸುಖಿನೋಭವಂತು ಎಂಬ ತತ್ವ ಜಾರಿಯಲ್ಲಿದೆ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕೆ ಮೈಸೂರು,ಫೆಬ್ರವರಿ,22,2021(..) :ಪ್ರಸ್ತುತ ಸರ್ವೇ ಜನ ಸುಖಿನೋಭವಂತು ತತ್ವವು ಗಾಳಿಯಲ್ಲಿ ಮಾಯವಾಗಿ ಸಂಘಜನ ಸುಖಿನೋಭವಂತು ಎಂಬ ತತ್ವವು ಜಾರಿಯಲ್ಲಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ಮೀಸಲಾತಿ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು. ಮೀಸಲಾತಿಯ ಪರಮ ವಿರೋಧಿಗಳಾದ ಆರ್ ಎಸ್ ಎಸ್ ನವರು ಈ ದಿನ ಸಮುದಾಯಗಳನ್ನು ಮೀಸಲಾತಿ ಹೋರಾಟಕ್ಕೆ ಇಳಿಸುತ್ತಿವೆ. ಇದರಿಂದ ಸರ್ವೇ ಜನ ಸುಖಿನೋಭವಂತು ತತ್ವವು ಗಾಳಿಯಲ್ಲಿ ಮಾಯವಾಗಿ ಸಂಘಜನ ಸುಖಿನೋಭವಂತು ಎಂಬ ತತ್ವವು ಜಾರಿಯಲ್ಲಿದೆ ಎಂದು ಕಿಡಿಕಾರಿದ್ದಾರೆ. ಇಂತಹ ಕುತಂತ್ರಿಗಳಿಂದ ಈ ದಿನ ಧರ್ಮದ ಕುರಿತಂತೆ ಪಾಠ ಕೇಳುವ ದುಸ್ಥಿತಿ ಬಂದಿತಲ್ಲಾ ಎಂದು ನೆನೆದರೆ ಬೇಸರವಾಗುತ್ತದೆ! ಎಂದು ಹೇಳಿದ್ದಾರೆ. : ----- -.. .