ಹೆಚ್ಚುವರಿ ಕಾವೇರಿ ನೀರು ಪಡೆಯಲು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ- ಸಿಎಂ ಬಿಎಸ್ ಯಡಿಯೂರಪ್ಪ…. ಬೆಂಗಳೂರು,ಫೆಬ್ರವರಿ, 22,2021(..): ಹೆಚ್ಚುವರಿ ಕಾವೇರಿ ನೀರು ಪಡೆಯಲು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಈ ಸಂಬಂಧ ಕಾನೂನು ಮಾರ್ಗದ ಮೂಲಕ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದರು. ಈ ಕುರಿತು ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕಾವೇರಿ ನದಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿನ ಯೋಜನೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಕಾನೂನು ಮಾರ್ಗದ ಮೂಲಕ ಬಿಗಿ ಕ್ರಮಕ್ಕೆ ಮುಂದಾಗುತ್ತೇವೆ. ಹಾಗೇ ಹೇಳಿಕೆ ಕೊಡುವುದರಿಂದ ಯಾವ ಪ್ರಯೋಜನವೂ ಆಗೋದಿಲ್ಲ ಎಂದರು. ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಲುವಾಗಿ ತಮಿಳುನಾಡು ಸರಕಾರ ವೈಗೈ ಹಾಗೂ ಗುಂಡಾರು ನದಿಗಳನ್ನ ಜೋಡಿಸುವ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದೆ. : - – - - .