ಮೀಸಲಾತಿ ಬಹಳ ಸೂಕ್ಷ್ಮ ವಿಚಾರ: ಒತ್ತಾಯ ಮಾಡಬಾರದು- ಸಚಿವ ಸುಧಾಕರ್…. ಕಲ್ಬುರ್ಗಿ,ಫೆಬ್ರವರಿ,21,2021(..):ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಮುದಾಯದ ಸ್ವಾಮೀಜಿ, ಸಮುದಾಯದ ಮುಖಂಡರು ಸಮಾವೇಶ ನಡೆಸುತ್ತಿದ್ದು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮೀಸಲಾತಿ ಬಹಳ ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ಸಮಯ ನಿಗದಿ ಮಾಡಿ ಒತ್ತಾಯ ಮಾಡಬಾರದು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲ್ಲ. ಕಾನೂನು ತಜ್ಞರ ವರದಿ ಪಡೆದು ನ್ಯಾಯ ಒದಗಿಸಲಾಗುತ್ತದೆ ಎಂದು ತಿಳಿಸಿದರು. ಹಾಗೆಯೇ ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ಕಲ್ಬುರ್ಗಿ ಜಿಲ್ಲಾಡಳಿತದ ಜತೆ ಮಾತನಾಡಿದ್ದೇನೆ. ಮಾರ್ಗಸೂಚಿ ಸಿದ್ಧರಪಡಿಸಲಾಗಿದೆ. ಸೋಂಕು ಹರಡದಂತೆ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಲಾಕ್ ಡೌನ್ ಪ್ರಸ್ತಾಪ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು. : – - -- .