ತವರಿನಲ್ಲಿ ಜೆಡಿಎಸ್ ಮೈತ್ರಿಗೆ ಗ್ರೀನ್ ಸಿಗ್ನಲ್ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ… ಮೈಸೂರು,ಫೆಬ್ರವರಿ,20,2021(..):ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜತೆ ಮೈತ್ರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೌದು, ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಚುನಾವಣೆ ಸಂಬಂಧ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಪಾಲಿಕೆ ಸದಸ್ಯರು, ಸ್ಥಳಿಯ ಮುಖಂಡರು ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಪಾಲಿಕೆ ಕಾಂಗ್ರೆಸ್ ಸದಸ್ಯರು ಮಾಜಿ‌ಮೇಯರ್ ಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಸ್ಥಳೀಯ ಮುಖಂಡರು ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಜತೆ ಮೈತ್ರಿಗೆ ಸಿದ್ಧರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಭೆ ಬಳಿಕ ಮಾತನಾಡಿರುವ ಅವರು, ಜೆಡಿಎಸ್ ತಾವಾಗಿಯೇ ಬಂದ್ರೆ ಮೈತ್ರಿ ಮಾಡಿಕೊಂಡರೆ ನನ್ನ ವಿರೋಧ ಇಲ್ಲ. ಹಳೆಯ ಒಪ್ಪಂದದಂತೆ ನಮಗೆ ಮೇಯರ್ ಸ್ಥಾನ ಅವರು ನೀಡಬೇಕು. ಕೊಟ್ಟರೆ ಮೈತ್ರಿ ಮುಂದುವರಿಸಲು ಹೇಳಿದ್ದೇನೆ. ಎಲ್ಲರಿಗೂ ಒಗ್ಗಟ್ಟಾಗಿರಿ ಜಗಳ ಮಾಡಿಕೊಳ್ಳಬೇಡಿ ಎಂದು ಹೇಳಿದ್ದೇನೆ ಎಂದರು. …. , . 20, 2021 (..): , . . . . . “ . ,” .: / / : -, – – – - – -