ರಿಲ್ಯಾಕ್ಸ್ ಮೂಡ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ……. ಮೈಸೂರು,ಫೆಬ್ರವರಿ,20,2021(..):ಮೂರು ದಿನಗಳ ತವರು ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಗೆಳೆಯರು ಹಾಗೂ ಆತ್ಮೀಯರ ಜೊತೆ ವಾಯುವಿಹಾರ ನಡೆಸಿದರು. ಮೈಸೂರಿನ ರಾಮಕೃಷ್ಣನಗರದ ಐ ಬ್ಲಾಕ್ ನಲ್ಲಿರುವ ಉದ್ಯಾನವನದಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ವಾಯುವಿಹಾರ ನಡೆಸಿ ವ್ಯಾಯಾಮ‌ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಾಗ, ಎಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಮನೆಯ ಕಡೆ ತೆರಳಿದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸೀತಾರಾಮ್ ಜೊತೆಗಿದ್ದರು. : - – - .