ಹೋರಾಟ ಮಾಡಿದವರಿಗೆಲ್ಲಾ ಮೀಸಲಾತಿ ಸಿಗಲ್ಲ- ಸಚಿವ ಕೆ.ಎಸ್ ಈಶ್ವರಪ್ಪ…. ಬೆಂಗಳೂರು,ಫೆಬ್ರವರಿ,19,2021(..):ಹೋರಾಟ ಮಾಡಿದವರಿಗೆಲ್ಲಾ ಮೀಸಲಾತಿ ಸಿಗಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಮೀಸಲಾತಿ ಹೋರಾಟ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಯಾವ ಸಮುದಾಯಕ್ಕೆ ಅನ್ಯಾಯವಾಗಿದೆ ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುತ್ತೇವೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಬಗ್ಗೆ ವರದಿ ನೀಡುತ್ತಾರೆ. ಎಲ್ಲಾ ಸ್ಥಿತಿಗತಿಗಳನ್ನ ಪರಿಶೀಲಸಿ ವರದಿ ನೀಡುತ್ತಾರೆ. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಮೀಸಲಾತಿ ನೀಡುವುದಿಲ್ಲ ಎಂದರು. ಹಾಗೆಯೇ ಹೋರಾಟ ಮಾಡಿದವರಿಗೆಲ್ಲ ಮೀಸಲಾತಿ ಸಿಗುವುದಿಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ ಮೀಸಲಾತಿ ಸಿಗಲಿದೆ ಎಂದರು. : - - - - .