“ಬೌದ್ಧಿಕ ಆಸ್ತಿ (ಐಪಿ) ಮಾಲೀಕತ್ವ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ಅಗತ್ಯ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಫೆಬ್ರವರಿ,19,2021(..): ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಬೌದ್ಧಿಕ ಆಸ್ತಿ (ಐಪಿ)ಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮಗಳಲ್ಲಿ ಬೌದ್ಧಿಕ ಆಸ್ತಿ (ಐಪಿ) ಮಾಲೀಕತ್ವ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು. ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮೈಸೂರು ವಿವಿ ಬೌದ್ಧಿಕ ಆಸ್ತಿ ಹಕ್ಕುಗಳು ಕೋಶದ ವತಿಯಿಂದ ಆಯೋಜಿಸಿದ್ದ “ ಪೇಟೆಂಟ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಏಳಿಗೆ ಕುರಿತು ಜಾಗೃತಿ” ಒಂದು ದಿನದ ಕಾರ್ಯಗಾರಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು. ಪದವೀಧರರನ್ನು ನಾವೀನ್ಯತೆಯ ಉತ್ಪಾದಕ ಪ್ರಜೆಗಳಾಗಿ ರೂಪಿಸಲು ಪಠ್ಯಕ್ರಮದಲ್ಲಿ ಬೌದ್ಧಿಕ ಆಸ್ತಿ (ಐಪಿ) ಮಹತ್ವದ ಕುರಿತು ಪರಿಗಣಿಸಬೇಕಿದೆ. ಬೌದ್ಧಿಕ ಆಸ್ತಿ (ಐಪಿ) ಜ್ಞಾನವು ಕಾನೂನು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಅದರ ಮೌಲ್ಯದ ಬಗ್ಗೆ ಇತರರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಸಲಹೆ ನೀಡಿದರು. ಬೌದ್ಧಿಕ ಆಸ್ತಿ ಹಕ್ಕುಗಳು ಶೈಕ್ಷಣಿಕ ಮತ್ತು ಸಾರ್ವಜನಿಕ ಸಂಶೋಧನಾ ಸಂಸ್ಥೆಗಳಿಗೆ ನೇರ ಕೊಡುಗೆಗಳಾಗಿದೆ. ನಾವೀನ್ಯತೆ ಮತ್ತು ಸಂಶೋಧನೆ ಹಾಗೂ ವಿಶೇಷವಾಗಿ ಉದಯೋನ್ಮುಖ ಆರ್ಥಿಕತೆಗಳು. ಉನ್ನತ ಶಿಕ್ಷಣದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆ (ಐಪಿಆರ್)ಯನ್ನು ಪ್ರಮುಖವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದರು. 2016ರ ಮೇ ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ರಾಷ್ಟ್ರೀಯ ಐಪಿಆರ್ ನೀತಿಯನ್ನು ಅನುಮೋದಿಸಲಾಗಿದ್ದು, ಇದು ಭಾರತ ಸರ್ಕಾರದಿಂದ ರೂಪುಗೊಂಡ ಮೊದಲ ಐಪಿಆರ್ ನೀತಿಯಾಗಿದೆ. ಈ ನೀತಿಯ ಪ್ರಾಥಮಿಕ ಗಮನವು ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಎಎಲ್ ಎಂಟಿ ಹಿರಿಯ ಕಾನೂನು ಸಲಹೆಗಾರ ಡಾ.ಎಂ.ಎನ್.ಭೀಮೇಶ್, ಎಎಲ್ ಎಂಟಿ ಕಾನೂನು ಪೇಟೆಂಟ್ ಏಜೆಂಟ್ ರಾಕೇಶ್ ಬಾಬು, ಮೈಸೂರು ವಿವಿ ಬೌದ್ಧಿಕ ಆಸ್ತಿ ಹಕ್ಕುಗಳು ಕೋಶದ ಸಂಯೋಜಕಿ ಡಾ.ಅಸ್ನ ಯುರೂಜ್, ಸಹ ಸಂಯೋಜಕಿ ಡಾ.ಸುಭಾ ಗೋಪಾಲ್ ಇತರರು ಇದ್ದರು. …. : , . 19, 2021 (..): “ ’ ,” . . , -, . - , “ ,” .“ . , ,” .“ 2016, . ,” .. ., , , . .., , , , , , . , , , , . , .: / / : - ()--- ---- .