ಕರೋನಾ ಬಳಿಕ ಮೊದಲ ನಾಟಕ ಪರ್ವಕ್ಕೆ ಅನುದಾನ ವಿಚಾರ: 50 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ- ಸಚಿವ ಅರವಿಂದ ಲಿಂಬಾವಳಿ… ಮೈಸೂರು,ಫೆಬ್ರವರಿ,18,2021(..) ಮೈಸೂರಿನ ರಂಗಾಯಣಕ್ಕೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಕೋಲಾಟ ವೀಕ್ಷಣೆ ಮಾಡಿದರು. ಮೈಸೂರು ಪ್ರವಾಸದಲ್ಲಿರುವ ಸಚಿವ ಅರವಿಂದ ಲಿಂಬಾವಳಿ ಇಂದು ರಂಗಾಯಣಕ್ಕೆ ಭೇಟಿ ನೀಡಿದರು. ಈ ವೇಳೆ ರಂಗಾಯಣದ ವಿದ್ಯಾರ್ಥಿಗಳ ಕೋಲಾಟ ವೀಕ್ಷಿಸಿದರು. ನಂತರ ಕರೋನಾ ಬಳಿಕ ಮೊದಲ ನಾಟಕ ಪರ್ವಕ್ಕೆ ಅನುದಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅರವಿಂದ ಲಿಂಬಾವಳಿ, 50 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲೇ ಅವರಿಗೆ ಅನುದಾನ ಬಂದು ಸೇರಲಿದೆ‌. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಸಿಗಲಿದೆ. ರಂಗಾಯಣ ರಾಜ್ಯವಲ್ಲ, ದೇಶದಲ್ಲು ಹೆಸರುವಾಸಿಯಾಗಿದೆ ಎಂದರು. ಪರ್ವ ನಾಟಕದ ದಿನಾಂಕದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಿಎಂ ಯಡಿಯೂರಪ್ಪ ಅವರನ್ನ ನಾಟಕ ಪ್ರದರ್ಶ‌ನಕ್ಕೆ ಕರೆತರುವ ವಿಚಾರದ ಬಗ್ಗೆಯು ಚರ್ಚೆ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು. : - - -