‘ಜನಸೇವಕ ಯೋಜನೆ’ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ…. ಬೆಂಗಳೂರು,ಫೆಬ್ರವರಿ,19,2021(..):ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಸಚಿವ ಸುರೇಶ್ ಕುಮಾರ್ ಮತ್ತು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅಧಿಕೃತವಾಗಿ ಚಾಲನೆ ನೀಡಿದರು. ನಾಗರೀಕರ ಮನೆಬಾಗಿಲಲ್ಲಿ ಅರ್ಜಿಗಳನ್ನು ಸ್ವೀಕರಿಸುವುದು ಹಾಗೂ ಸೇವೆಗಳನ್ನು ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಲ್ಲಿ ಒಳಪಡುವ ಇಲಾಖೆಗಳು ಈ ಕೆಳಕಂಡಂತಿವೆ. 1} ಆಧಾರ್ ಕಾರ್ಡ್. 2} ಕಂದಾಯ ಇಲಾಖೆ 21 ಸೇವೆಗಳು (ಜಾತಿ/ ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಅಂಗವಿಕಲ/ ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇತರೆ ಯೋಜನೆಗಳು ಒಳಪಡುತ್ತವೆ.) 3} ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಸೇವೆಗಳು. 4} ಬಿಬಿಎಂಪಿ ವ್ಯಾಪ್ತಿಯ 18 ಸೇವೆಗಳು. 5} ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಗಳು. 6} ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೇವೆಗಳು. 7} ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಮುಖ 3 ಸೇವೆಗಳು. 8} ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಬಿಪಿಎಲ್ ಪಡಿತರ ಚೀಟಿ) 9} ಇ-ಸ್ಟ್ಯಾಂಪ್. 10} ಸಾರಿಗೆ ಇಲಾಖೆ ಸೇವೆಗಳು. 11} ಇನ್ನಿತರೆ ಇಲಾಖೆಯ ಸೇವೆಗಳು “ಜನಸೇವಕ ಯೋಜನೆ”ಯಲ್ಲಿ ಒಳಪಡುತ್ತವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ (080-44554455), ಜಾಲತಾಣ (....) ಹಾಗೂ ಜನಸೇವಕ ಮೊಬೈಲ್ ಆಪ್ ಮೂಲಕ ಸಂಪರ್ಕಿಸಬಹುದು. ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗರೀಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದ್ದಾರೆ. …. , . 19, 2021 (..): , , .. ‘’ . . :1. card2. 21 (/ , , / , , ).3. ’ .4. 18 BBMP5. ’ Department6. services7. 3 .8. ( )9. -stamp10. services11. , 080-44554455 .... ‘’ . .: / / .. / : - – -