ಪ್ರಾಂಶುಪಾಲರೊಬ್ಬರಿಗೆ ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು ಬೆಂಗಳೂರು,ಫೆಬ್ರವರಿ,19,2021(..):ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡುರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳಾ ಪ್ರಾಂಶುಪಾಲರೊಬ್ಬರು ಫೆಬ್ರವರಿ 6 ರಂದು ಯುನಿಯನ್ ಕ್ಲಬ್ ಗೆ ಹೋಗಿದ್ದ ವೇಳೆ ಮೋಹನ್ ರಾವ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಕ್ಲಬ್ ಗೆ ಹೋಗಿದ್ದಾಗ ಶೌಚಾಲಯಕ್ಕೆಂದು ತೆರಳುತ್ತಿದ್ದ ವೇಳೆ ಅವರನ್ನು ತಡೆದಿದ್ದ ಮೋಹನ್ ರಾವ್, ಅಸಭ್ಯವಾಗಿ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಾಂಶುಪಾಲರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೋಹನ್ ರಾವ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. : – - – .