“ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳ ಮಾಡುವುದು ಸುಲಭ” : ಯತ್ನಾಳ್ ವಿರುದ್ಧ ರಘು ಕೌಟಿಲ್ಯ ಕಿಡಿ ಮೈಸೂರು,ಫೆಬ್ರವರಿ,18,2021(..) :ಪಕ್ಷದಿಂದ ಉಚ್ಚಾಟಿಸಲ್ಪಟ್ಟುಕೊಳ್ಳಲೇ ಬೇಕೆಂದು ನಿರ್ಧರಿಸಿದಂತೆ ವರ್ತಿಸುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ‌ ಅವರೇ, ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಮಾಡುವುದು ಅತ್ಯಂತ ಸುಲಭ ಎಂದು ರಾಜ್ಯ ಬಿಜೆಪಿ ಸಹವಕ್ತಾರ ರಘು ಕೌಟಿಲ್ಯ ಕಿಡಿಕಾರಿದ್ದಾರೆ. ಜನಮನದ ಹೃದಯ ಗೆದ್ದಿರುವ ಬಿ.ಜೆ.ವಿಜಯೇಂದ್ರ ಅವರ ಹೆಸರು ಕೇಳಿದರೆ ದುಸ್ವಪ್ನಕಂಡಂತೆ ಬಡಬಡಿಸುತ್ತಿರುವಿರಲ್ಲ, ಎಲುಬಿಲ್ಲದ ನಾಲಿಗೆಯಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಮಾಡುವುದು ಅತ್ಯಂತ ಸುಲಭ ಎಂದು ತಿಳಿದಿರುವಂತಿದೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.ಪ್ರಚಾರ ಹುಚ್ಚು ನಿಮ್ಮನ್ನು ತಲೆತಿರುಗಿಸಿದಂತಿದೆ ನಿಮ್ಮ ಮಾತುಗಳನ್ನು ವ್ಯಕ್ತಿಗತ ತೇಜೋವಧೆಗೆ ಮೀಸಲಿಟ್ಟಂತಿದೆ. ವಿಜಯೇಂದ್ರ ಅವರ ಹೆಸರು ಹೇಳಿದರೆ ಅತಿ ಹೆಚ್ಚು ಪ್ರಚಾರ ದೊರೆಯತ್ತದೆ ಎಂಬ ಹುಚ್ಚು ನಿಮ್ಮನ್ನು ತಲೆತಿರುಗಿಸಿದಂತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. : -------- -