ಯಾವುದೇ ದುರುದ್ಧೇಶದಿಂದ ಅಣ್ಣಾವ್ರ ಬಗ್ಗೆ ಮಾತನಾಡಿಲ್ಲ- ಶಾಸಕ ಎನ್.ಎ ಹ್ಯಾರಿಸ್… ಬೆಂಗಳೂರು,ಫೆಬ್ರವರಿ,18,2021(..):ನಿನ್ನೆ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪ್ರತಿಮೆ ಬಗ್ಗೆ ಹೇಳಿಕೆ ನೀಡಿ ನಾಲಿಗೆ ಹರಿ ಬಿಟ್ಟಿದ್ದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಇದೀಗ ಅಣ್ಣವ್ರ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಎನ್.ಎ ಹ್ಯಾರಿಸ್, ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದರೇ ಕ್ಷಮೆ ಇರಲಿ, ಯಾವುದೇ ದುರುದ್ಧೇಶದಿಂದ ಅಣ್ಣವ್ರ ಬಗ್ಗೆ ಮಾತನಾಡಿಲ್ಲ. ಅಣ್ಣವ್ರನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣವ್ರ ಪ್ರತಿಮೆ ಇಡಲು ನನ್ನ ಬೆಂಬಲವೂ ಇದೆ ಎಂದಿದ್ದಾರೆ. ಹಾಗೆಯೇ ನಾನು ಕನ್ನಡ ನಾಡಿನಲ್ಲಿ ಇದ್ದೇನೆ. ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತೇನೆ ಎಂದು ಶಾಸಕ ಎನ್.ಎ ಹ್ಯಾರಿಸ್ ತಿಳಿಸಿದ್ದಾರೆ. : -. - - - - - .. .