ಮೈಸೂರು ಜಿಪಂ ನೂತನ ಸಿಇಓ ಆಗಿ ಎ.ಎಂ ಯೋಗೇಶ್ ಅಧಿಕಾರ ಸ್ವೀಕಾರ… ಮೈಸೂರು,ಫೆಬ್ರವರಿ,17,2021(..):ಮೈಸೂರು ಜಿಲ್ಲಾ ಪಂಚಾಯತ್ ನ ನೂತನ ಸಿಇಓ ಆಗಿ ಎ. ಎಂ ಯೋಗೇಶ್ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ನೂತನ‌ ಸಿಇಓ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು. ಯೋಗೇಶ್ 2004ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಯೋಗೇಶ್ ಹೆಚ್ಚುವರಿ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಮುಡಾ, ಕಾಡಾದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಸಿಇಓ ಯೋಗೇಶ್, ಮೈಸೂರಿಗೂ ನನಗೂ ಅವಿನಾಭಾವ ಸಂಬಂಧ ಇದೆ. ಮೈಸೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದರು. : - –- – -