ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ಧರಾಮಯ್ಯ ನಕಾರ… ನವದೆಹಲಿ,ಫೆಬ್ರವರಿ,17,2021(..):ಸಿದ್ದರಾಮಯ್ಯ ಅವರ ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂದು ಪೇಜಾವರ ಶ್ರೀಗಳು ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಸಿದ್ಧರಾಮಯ್ಯ, ನಾನು ಯಾವ ಸ್ವಾಮಿ ಬಗ್ಗೆಯೂ ಮಾತನಾಡುವುದಿಲ್ಲ. ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಬಂದಿದ್ದರು. ಆದರೆ ನಾನು ವಿವಾದಿತ ರಾಮಮಂದಿರಕ್ಕೆ ದೇಣಿಗೆ ಕೊಡಲ್ಲ ಎಂದಿದ್ದೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದ ಪೇಜಾವರ ಶ್ರೀಗಳು, ಸಿದ್ಧರಾಮಯ್ಯ ಅವರ ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂದಿದ್ದರು. : –- – -