ಈಶ್ವರಪ್ಪನ ವಿರುದ್ಧ ಈಶ್ವರಪ್ಪನೇ ಹೋರಾಟ ಮಾಡಿದಂತೆ- ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ…. ಬೆಂಗಳೂರು,ಫೆಬ್ರವರಿ,17,2021(..):ಕುರುಬರ ಎಸ್ಟಿ ಮೀಸಲಾತಿಗೆ ಸಚಿವ ಈಶ್ವರಪ್ಪ ಹೋರಾಟ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಕುರುಬ ಸಮುದಾಯದ ಎಸ್ಟಿ ಹೋರಾಟಕ್ಕೆ ಇದು ಸೂಕ್ತ ಸಮಯವಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆ ಶಿಫಾರಸ್ಸನ್ನು ಕೇಂದ್ರ ತಿರಸ್ಕರಿಸಿದರೆ ಮಾತ್ರವೇ ಹೋರಾಟದ ಅಗತ್ಯ ಬೀಳಲಿದೆ. ಈಶ್ವರಪ್ಪ ಓರ್ವ ಬಿಜೆಪಿ ನಾಯಕ. ಮೀಸಲಾತಿಗೆ ಶಿಫಾರಸ್ಸು ಮಾಡಬೇಕಾದ, ಆ ಶಿಫಾರಸ್ಸನ್ನು ಅನುಮೋದಿಸಬೇಕಾದ ಸರ್ಕಾರಗಳು ಬಿಜೆಪಿ ಕೈಯಲ್ಲಿವೆ. ಹಾಗಾಗಿ ಇದೊಂದು ರೀತಿ ಈಶ್ವರಪ್ಪನ ವಿರುದ್ಧ ಈಶ್ವರಪ್ಪನೇ ಹೋರಾಟ ನಡೆಸಿದಂತೆ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮಾತ್ರ ಮೀಸಲಾತಿ ನೀಡಲು ಅವಕಾಶವಿದೆ ಎಂದು ಸಿದ್ಧರಾಮಮಯ್ಯ ಸಚಿವ ಈಶ್ವರಪ್ಪ ಅವರ ಕಾಲೆಳೆದಿದ್ದಾರೆ. … : , . 17, 2021 (..): ’ . , “ . . .” “ . . ’ . ,” .: / / / : -- –- -