ಟಿವಿ, ಫ್ರಿಡ್ಜ್ ಬಡವರು ಇಡಬಾರ್ದಾ…? ಸಚಿವ ಉಮೇಶ್ ಕತ್ತಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಟಾಂಗ್… ಬೆಂಗಳೂರು,ಫೆಬ್ರವರಿ,16,2021(..): ಟಿವಿ ಫ್ರಿಡ್ಜ್, ಬೈಕ್ ಇರುವವರಿಗೆ ರೇಷನ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿ ಮತ್ತೆ ಆ ನಿರ್ಧಾರವನ್ನ ವಾಪಸ್ ಪಡೆದ ಆಹಾರ ಸಚಿವ ಉಮೇಶ್ ಕತ್ತಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಚಾರ್ಯ, ಉಮೇಶ ಕತ್ತಿ, ಲಾಬಿಯೋ ಗೊತ್ತಿಲ್ಲ. ನಮ್ಮದು ಬಡವರ, ಶೋಷಿತರ ಪರವಾದ ಸರ್ಕಾರ. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಬಾರದು. ಮನೋರಂಜನೆಗಾಗಿ, ದೇಶದ ಪ್ರಸ್ತುತ ವಾತಾವರಣ, ಧಾರವಾಹಿಗಾಗಿ ಟಿವಿ ಉಪಯೋಗಿಸ್ತಾರೆ. ಟಿವಿ ಪಿಡ್ಜ್ ಬಡವರು ಇಡಬಾರ್ದಾ…? ಎಂದು ಹೇಳಿದರು. ಉಮೇಶ್ ಕತ್ತಿ ಅರ್ಥ ಮಾಡ್ಕೋಬೇಕು. ಬಡವರ ಕಾರ್ಡ್ ರದ್ದು ಮಾಡಲು ಬಿಡಲ್ಲ . ಕತ್ತಿ ಹೇಳಿಕೆ ಸರ್ಕಾರದ ಹೇಳಿಕೆ ಅಲ್ಲ. ಬೇಕಿದ್ದರೇ ನಕಲಿ ಕಾರ್ಡ್ ರದ್ದು ಮಾಡಲಿ ಎಂದು ಎಂ.ಪಿ ರೇಣುಕಾಚಾರ್ಯ ಸಲಹೆ ನೀಡಿದರು. : -- –- - –