ಫಾಸ್ಟ್ಯಾಗ್ ಕಡ್ಡಾಯ ಹಿನ್ನೆಲೆ: ಮೈಸೂರಿನ ಟೋಲ್‌ ನಲ್ಲಿ ಜಾರಿಯಾಗದ ಆದೇಶ… ಮೈಸೂರು,ಫೆಬ್ರವರಿ,16,2021(..):ದೇಶಾದ್ಯಂತ ನಿನ್ನೆ ಮಧ್ಯರಾತ್ರಿಯಿಂದಲೇ ಎಲ್ಲ ವಾಹನಗಳಿಗೂ ಇಂದಿನಿಂದ ​ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್​ಟ್ಯಾಗ್ ಇಲ್ಲದ ವಾಹನಗಳು ಇಂದಿನಿಂದ ದುಪ್ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ. ನಿನ್ನೆ ರಾತ್ರಿಯಿಂದಲೇ ದೇಶಾದ್ಯಂತ ಹೊಸ ನಿಯಮ ಜಾರಿಯಾಗಿದೆ. ಆದರೆ ಮೈಸೂರಿನ ಟೋಲ್ ನಲ್ಲಿ ಈ ಆದೇಶ ಜಾರಿಯಾಗಿಲ್ಲ. ಹೌದು ಫಾಸ್ಟ್ಯಾಗ್ ಇಲ್ಲದ ವಾಹನಗಳ ಬಳಿಯೂ ಮೊದಲಿನಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳ ಬಳಿಯೂ ಮೊದಲಿನಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ. ಕಾರುಗಳಿಗೆ 50, ಮಿನಿಬಸ್ 75, ಟ್ರಕ್ 160, 3 ಆ್ಯಕ್ಸೆಲ್ ವಾಹನ 175, 4ರಿಂದ 6 ಆ್ಯಕ್ಸೆಲ್ 255, 7 ಆ್ಯಕ್ಸೆಲ್ ವಾಹನ 310 ರೂ ಸಂಗ್ರಹಿಸಲಾಗುತ್ತಿದೆ. ಬೇರೆ ಕಡೆ ಫಾಸ್ಟೈಗ್ ಇಲ್ಲದ ವಾಹನಗಳಿಗೆ ಸಿಬ್ಬಂದಿ ಡಬಲ್ ಟೋಲ್ ಕಟ್ಟಿಸಿಕೊಳ್ಳುತ್ತಿದ್ದು ಆದರೆ ಮೈಸೂರಿನಲ್ಲಿ ಮಾತ್ರ ಅಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ. : - –- – -.