ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಚಾಲನೆ ನೀಡಿದ ಶಾಸಕ ಎಸ್.ಎ ರಾಮದಾಸ್… ಮೈಸೂರು,ಫೆಬ್ರವರಿ,16,2021(..):ಗೋಪಾಲಕರ ಸಂಕಷ್ಟಕ್ಕೆ ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೈಜೋಡಿಸಿದ್ದು, ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಕನಕಗಿರಿಯ ಸುಯೇಜ್ ಫಾರಂನಲ್ಲಿ ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಶಾಸಕ ರಾಮದಾಸ್ ಚಾಲನೆ ನೀಡಿದ್ದಾರೆ. ನೀರು ಹರಿಸುವ ಮೂಲಕ ಗೋವುಗಳಿಗೆ ಹುಲ್ಲು ಬೆಳೆಸಲು ಚಿಂತನೆ ಮಾಡಲಾಗಿದ್ದು, ಗೋವುಗಳ ರಕ್ಷಣೆ ಹಾಗೂ ಗೋಪಾಲಕರಿಗೆ ಹುಲ್ಲು ಒದಗಿಸುವ ಯೋಜನೆ ಇದಾಗಿದೆ. ಸುಯೋಜ್ ಫಾರಂ ಸುತ್ತಮುತ್ತಲಿನ ಪ್ರದೇಶಕ್ಕೆ ಪೈಪ್ ಲೈನ್ ವ್ಯವಸ್ಥೆ ಮೂಲಕ ನೀರುಹರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ ರಾಮದಾಸ್ ಗೆ ಸ್ಥಳೀಯ ಪಾಲಿಕೆ ಸದಸ್ಯರು ಸಾಥ್ ನೀಡಿದ್ದಾರೆ. : - - – – –