ಮರು ಮೌಲ್ಯಮಾಪನದ ವೇಳೆ ಶೇ.10ಕ್ಕಿಂತ ಹೆಚ್ಚು ಅಂಕಗಳಿಸಿರುವ ಮೈಸೂರು ವಿವಿ ಯುಜಿ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ಮರುಪಾವತಿಗೆ ನಿರ್ಧಾರ.. ಮೈಸೂರು,ಫೆಬ್ರವರಿ,15,2021(..):ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಅಂಕಗಳಿಸಿರುವ ಸ್ನಾತಕ ಪದವಿ () ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಶುಲ್ಕವನ್ನ ಮರುಪಾವತಿಸಲು ಮೈಸೂರು ವಿಶ್ವ ವಿದ್ಯಾನಿಲಯ ನಿರ್ಧರಿಸಿದೆ. ದಿನಾಂಕ: 29-01-2021 ರಂದು ನಡೆದ ಸಿಂಡಿಕೇಟ್ ಸಭೆಯ ನಿರ್ಣಯದಂತೆ, ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ () ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕಾಗಿ ಪಾವತಿಸಿರುವ ಪೂರ್ಣ ಶುಲ್ಕವನ್ನು ಮರುಭರಿಕೆ () ಮಾಡಲಾಗುವುದು. ಈ ಸಂಬಂಧ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ವ್ಯಾಸಂಗ ಮಾಡಿದ ಕಾಲೇಜಿನ ಮುಖಾಂತರ ಈ ಕಛೇರಿಗೆ ಕಳುಹಿಸಿಕೊಡಬೇಕು. ಅರ್ಜಿಯೊಂದಿಗೆ ಮರುಮೌಲ್ಯಮಾಪನಕ್ಕಾಗಿ ಶುಲ್ಕ ಪಾವತಿಸಿರುವ ಮೂಲ ಚಲನ್ ಅಥವಾ ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿದಲ್ಲ, ಹಣ ಪಾವತಿಸಿರುವ ಬಗೆಗಿನ ಮುದ್ರಿತ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು ಎಂದು ಪರೀಕ್ಷಾಂಗ ಉಪಕುಲಸಚಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : - – - 10 – --