“ಮೀಸಲು ಸೌಲಭ್ಯಕ್ಕೆ ಹೋರಾಟ ನಡೆಸಿದ್ದು ತಪ್ಪೇನಲ್ಲ” : ಡಿಸಿಎಂ ಗೋವಿಂದ ಕಾರಜೋಳ ಬೆಂಗಳೂರು,ಫೆಬ್ರವರಿ,14,2021(..) :ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲು ಸೌಲಭ್ಯಕ್ಕೆ ಹೋರಾಟ ನಡೆಸಿದ್ದು ತಪ್ಪೇನಲ್ಲ. ಸಾಂವಿಧಾನದ ಆಶಯದಂತೆ ಶೋಷಿತ ಎಲ್ಲ ಸಮುದಾಯಗಳಿಗೂ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸಿಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದೇ ಸಂವಿಧಾನದ ಆಶಯ. ಈ ಆಶಯದ ವ್ಯಾಪ್ತಿಗೆ ಬರುವ ಎಲ್ಲ ಸಮುದಾಯಗಳೂ ಮೀಸಲು ಸೌಲಭ್ಯ ಪಡೆಯಲಿ ಎಂದರು. : ------ --