ಫೆ.21 ರಂದು ‘ಪರ್ವ ವಿರಾಟ್ ದರ್ಶನ’ ಒಂದು ವಿಚಾರ ಸಂಕಿರಣ…. ಮೈಸೂರು,ಫೆ,13,2021(..): ಫೆಬ್ರವರಿ 21 ರಂದು ಸಾಹಿತಿ ಎಸ್.ಎಲ್ ಭೈರಪ್ಪನವರ ಪರ್ವ ವಿರಾಟ್ ದರ್ಶನ ಒಂದು ವಿಚಾರ ಸಂಕಿರಣವನ್ನ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕರ್ನಾಟಕ ಕಲಾಮಂದಿರದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ಪ್ರವೇಶ ಉಚಿತವಿರಲಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಜಿ.ಎಲ್ ಶೇಖರ್ ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ. ಇನ್ನು ಮಾರ್ಚ್ 12 ರಿಂದ ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ. : – ‘ ’- 21-