ಡಿ ಬಾಸ್ ಬರ್ತ್ ಡೇ ಗೆ ‘ರಾಬರ್ಟ್’ ಟೀಸರ್ ರಿಲೀಸ್ ಬೆಂಗಳೂರು, ಫೆಬ್ರವರಿ 12, 2021 (..):ಡಿ ಬಾಸ್ ದರ್ಶನ್ ಹುಟ್ಟುಹಬ್ಬಕ್ಕೆ ಕಾದಿರುವ ಅಭಿಮಾನಿಗಳಿಗೂ ಗಿಫ್ಟ್ ಕಾದಿದೆ! ಹೌದು. ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೈಲರ್ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ. ಫೆಬ್ರವರಿ 16 ರಂದು ದರ್ಶನ್ ಜನ್ಮದಿನವಿದ್ದು, ಆ ದಿನದಂದು ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಉಡುಗೊರೆ ನೀಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ವಿಚಾರವನ್ನು ನಿರ್ದೇಶಕ ತರುಣ್ ಸುಧೀರ್ ಪ್ರಕಟಿಸಿದ್ದಾರೆ. ಅಂದಹಾಗೆ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.