“ಮೈಸೂರು ವಿವಿ ಘಟಿಕೋತ್ಸವ” : ಉಡುಪಿನ ಮಾದರಿ ಕುರಿತು ಸಲಹೆ ಆಹ್ವಾನ… ಮೈಸೂರು,ಫೆಬ್ರವರಿ,11,2021(..) :ಮೈಸೂರು ವಿವಿಯ ಘಟಿಕೋತ್ಸವ ಉಡುಪಿನ ಮಾದರಿಯನ್ನು ಸೂಚಿಸಲು ಸಾರ್ವಜನಿಕರು, ಮೈಸೂರು ವಿವಿ ಹಳೆಯ ವಿದ್ಯಾರ್ಥಿಗಳು ಮತ್ತು ವಿನ್ಯಾಸಕರಿಂದ ಸಲಹೆಗಳನ್ನು ಆಹ್ವಾನಿಸಿದೆ.ವಿವಿಯ ಕುಲಸಚಿವ(ಪರೀಕ್ಷಾಂಗ)ರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ರಚಿಸಿದ ಸಮಿತಿಯು ಘಟಿಕೋತ್ಸವ ಉಡುಪಿನ ಮಾದರಿಯನ್ನು ಸೂಚಿಸಲು ತಿಳಿಸಿದೆ. ಯುಜಿಸಿ ಮತ್ತು ರಾಜ್ಯಪಾಲರ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಖಾದಿ ಮತ್ತು ಕೈಮಗ್ಗ ಬಟ್ಟೆಗಳನ್ನು ಬಳಸುವಂತೆ ಸೂಚಿಸಲಾಗಿದೆ. ಆದ್ದರಿಂದ, ಆಸಕ್ತರು ಕರ್ನಾಟಕ ರಾಜ್ಯ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಘಟಿಕೋತ್ಸವದ ಉಡುಪಿನ ಮಾದರಿ ಮತ್ತು ಬಣ್ಣವನ್ನು ಸೂಚಿಸಬಹುದಾಗಿದೆ.ಸಲಹೆಗಳನ್ನು ಫೆಬ್ರವರಿ 18ರೊಳಗೆ .@. ಗೆ ಅಥವಾ ವಾಟ್ಸಾಪ್ ಸಂಖ್ಯೆಗೆ(9986043711) ಎಂಬ ಶೀರ್ಷಿಕೆಯೊಂದಿಗೆ ಕಳುಹಿಸಬಹುದು. ಮೈಸೂರು ವಿವಿ ಕುಲಸಚಿವ(ಪರೀಕ್ಷಾಂಗ)ರ ಕಚೇರಿಯ ಸಲಹಾ ಪಟ್ಟಿಗೆಗೆ ಸಲಹೆಗಳ ಚೀಟಿಯನ್ನು ಹಾಕಬಹುದು ಎಂದು ತಿಳಿಸಲಾಗಿದೆ. … , . 11, 2021 (..): , , . () . ’ . . 18. .@. 9986043711, . (), , .: / / ()—————————————— : -----