“ಸಚಿವ ಬಿ.ಎ.ಬಸವರಾಜ ಅವರನ್ನ ಭೇಟಿ ಮಾಡಿದ ಪೋಲೆಂಡ್ ದೇಶದ ರಾಯಭಾರಿ” ಬೆಂಗಳೂರು,ಫೆಬ್ರವರಿ,08,2021(..) :ರಿಪಬ್ಲಿಕ್ ಆಫ್ ಪೋಲೆಂಡ್ ದೇಶದ ರಾಯಭಾರಿ ಪ್ರೊ. ಆಡಮ್ ಬುರೂಖಾವಸ್ಕಿ ಅವರು ಇಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.ರಾಜ್ಯದಲ್ಲಿ ಬಯೋ ಗ್ಯಾಸ್, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕೂಲಂಕಷವಾಗಿ ಚರ್ಚಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಪ್ರತಿಕ್ರಿಯಿಸಿದ್ದಾರೆ. ಕೌನ್ಸಿಲ್ ಜನರಲ್ ಡಮಿನ್ ರಝಕ್, ಕಾರ್ಯದರ್ಶಿ ಕ್ಲೌಫಿಝ್ ಟೆಕ್ರೌಝಯಿ, ಬೆಂಗಳೂರಲ್ಲಿ ಇರುವ ಪೋಲ್ಯಾಂಡ್ ನ ಗೌರವ ಕೌನ್ಸಿಲ್ ರಘು ಸಿ.ರಾಜಪ್ಪ, ಸಚಿವರ ಅಪ್ತ ಕಾರ್ಯದರ್ಶಿ ಸಿ.ನಾಗರಾಜ್ ಇದೇ ವೇಳೆ ಉಪಸ್ಥಿತರಿದ್ದರು. : ----.. : . , . 8-2-2021 . ’ . | , , . .