“ಸಾಲಬಾಧೆ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ” ಮೈಸೂರು,ಫೆಬ್ರವರಿ,08,2021(..) :ಸಾಲಬಾಧೆ ತಾಳಲಾರದೆ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಕೃಷ್ಣೇಗೌಡ(65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3.10 ಎಕರೆ ಜಮೀನು ಹೊಂದಿದ್ದ ಕೃಷ್ಣೇಗೌಡ ಅವರು ತಂಬಾಕು ಜೋಳ ಮತ್ತು ರಾಗಿ ಬೆಳೆ ಬೆಳೆದಿದ್ದರು. ಹನಗೋಡು ಬ್ಯಾಂಕಿನಲ್ಲಿ 4 ಲಕ್ಷ ಸಾಲ ಪಡೆದಿದ್ದರು. ಒಡವೆ ಸಾಲ 1.54 ಲಕ್ಷ ಹಾಗೂ 4 ಲಕ್ಷ ಕೈಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. “ಬೆಳೆದ ಬೆಳೆಗೆ ಬೆಲೆ ಇಲ್ಲ, ಸಾಲ ತೀರಿಸಲು ಸಾಧ್ಯವಾಗಿಲ್ಲ” ಕಳೆದ ವರ್ಷ ಅತಿಯಾದ ಮಳೆ.ಈ ಬಾರಿ ಕೊರೊನಾ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದರು. ಸಾಲ ತೀರಿಸಲು ಸಾಧ್ಯವಾಗದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -----