ಎಲ್ಲಾ ದೇಶಗಳ ಗಮನ ಈಗ ಭಾರತದತ್ತ: ನಮ್ಮ ಸರ್ಕಾರ ಪ್ರಜಾಪ್ರಬುತ್ವ ರಕ್ಷಣೆಗೆ ಕಟಿಬದ್ಧ- ಪ್ರಧಾನಿ ನರೇಂದ್ರ ಮೋದಿ… ನವದೆಹಲಿ,ಫೆಬ್ರವರಿ,8,2021(..):ಭಾರತ ದೇಶ ಅವಕಾಶಗಳ ಆಗರವಾಗಿದೆ. ಎಲ್ಲಾ ದೇಶಗಳ ಗಮನ ಈಗ ಭಾರತ ದೇಶದತ್ತ ಇದೆ. ನಮ್ಮ ಸರ್ಕಾರ ಪ್ರಜಾಪ್ರಬುತ್ವ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ, ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಇಂತಹ ಸವಾಲುಗಳ ನಡುವೆ, ಜಗತ್ತಿನಲ್ಲಿ ಹೊಸ ಭರವಸೆ ಯೊಂದು ಹುಟ್ಟಿಕೊಳ್ಳುತ್ತದೆ, ಹೊಸ ಉತ್ಸಾಹ ಹುಟ್ಟುತ್ತದೆ ಮತ್ತು ಹೊಸ ಆತ್ಮವಿಶ್ವಾಸವು ಸ್ವಾವಲಂಬಿ ಭಾರತದ ಹಾದಿಯನ್ನು ತೋರಿಸುತ್ತದೆ ಎಂದರು. ರಾಷ್ಟ್ರಪತಿ ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರಪತಿ ಭಾಷಣ ಆತ್ಮವಿಶ್ವಾಸ ಹುಟ್ಟಿಸುವ ದಿಶೆಯಲ್ಲಿತ್ತು. ಯುವಕರ ಮೇಲೆ ಭಾರತದ ಭವಿಷ್ಯ ನಿಂತಿದೆ. ನವ ಭಾರತ ನಿರ್ಮಾಣಮಾಡುವಲ್ಲಿ ಯುವಕರ ಪಾತ್ರ ದೊಡ್ಡದು. ಅಪರಿಚಿತ ಶತ್ರು ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ದೀಪ ಹಚ್ಚಲು ನೀಡಿದ್ದ ಕರೆಯನ್ನ ಕೆಲವರು ಗೇಲಿ ಮಾಡಿದರು. ಕೋವಿಡ್ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಗೇಲಿ ಮಾಡಿದರು. ಕೋವಿಡ್ ವಿರುದ್ಧದ ಹೋರಾಟದ ಗೆಲುವು ಕೇವಲ ಪಕ್ಷದ ಗೆಲುವಲ್ಲ. ಇದು ಭಾರತ ದೇಶದ ಪಾಲಿನ ಗೆಲುವಾಗಿದೆ. ಕೋವಿಡ್ ವಿರುದ್ಧ ಇಡಿ ದೇಶವೇ ಒಟ್ಟಾಗಿ ಹೋರಾಡಿದೆ. ವಿಶ್ವಕ್ಕೆ ಅತಿ ಹೆಚ್ಚು ಲಸಿಕೆ ನೀಡಿದ್ದು ಭಾರತ. ಭಾರತದಲ್ಲಿ ಪ್ರಜಾಪ್ರಭುತ್ವ ಅತ್ಯಂತ್ರ ಬಲಿಷ್ಠವಾಗಿದೆ.. ಸರ್ಕಾರ ವಿರೋಧಿಸಲು ಹಲುವ ವಿಷಯಗಳಿವೆ. ಹೀಗಾಗಿ ಮನೋಬಲವನ್ನ ಕುಗ್ಗಿಸಬೇಡಿ ಎಂದು ವಿಪಕ್ಷಘಳ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ಮೂಲಬೂತ ಶಕ್ತಿಗಳ ಬಗ್ಗೆ ತಿಳಿಯುವ ಅಗತ್ಯವಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ಗೊತ್ತಿದೆ. ತುರ್ತು ಪರಿಸ್ಥಿತಿ ವೇಳೆ ಮಾಧ್ಯಮದ ಸ್ಥಿತಿ ಹೇಗಿತ್ತು ಎಂಬುದು ಗೊತ್ತಿದೆ. ಪ್ರಜಾಪ್ರಭುತ್ವದ ರಕ್ಷಣೆ ಬಗ್ಗೆ ನಮಗೆ ಪಾಠ ಮಾಡಬೇಡಿ. ನಮ್ಮ ಸರ್ಕಾರ ಪ್ರಜಾಪ್ರಬಭುತ್ವ ರಕ್ಷಣೆಗೆ ಕಟಿಬದ್ಧ ಭಾರತ ಈಗ ವೇಗವಾಗಿ ಅಭಿವೃದ್ದಿಯಾಗುತ್ತಿರುವ ದೇಶ ಎಂದು ಪ್ರಧಾನಿ ಮೋದಿ ತಿಳಿಸಿದರು. …. : , , . 08, 2021 (..): “ . , . ,” . ’ ’ , “ , .”“ ’ . . . . . , -19 . -19 ’ , , . . . ,” . , “ , ’ -.”: / : – - – - - .