“ಅವಕಾಶ ಇದ್ದರೆ ಮೀಸಲಾತಿ” : ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ಬೆಂಗಳೂರು,ಫೆಬ್ರವರಿ,07,2021(..) :ಕುರುಬ ಸಮುದಾಯ ಎಸ್ಟಿ ಸೇರ್ಪಡೆ ಹೋರಾಟ ಕುರಿತು ಸಿಎಂ ಬಿ.ಎಸ್.ವೈ ವೈಜ್ಞಾನಿಕವಾಗಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಅವಕಾಶ ಇದ್ದರೆ ಮೀಸಲಾತಿ ಕೊಡುತ್ತಾರೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು. ಕುರುಬ ಸಮುದಾಯಕ್ಕೆ ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ನಡೆಸುತ್ತಿರುವ ಸಮಾವೇಶ ಕುರಿತು ಪ್ರತಿಕ್ರಿಯಿಸಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಎಲ್ಲ ಸಮುದಾಯದಲ್ಲೂ ಹಿಂದುಳಿದವರು ಇರುತ್ತಾರೆ. ಎಲ್ಲಾ ಸಮುದಾಯಕ್ಕೂ ತನ್ನದೇಯಾದ ಬೇಡಿಕೆಗಳು ಇರುತ್ತೆ. ಅವಕಾಶ ಇದ್ದರೆ ಮೀಸಲಾತಿ ಕೊಡುತ್ತಾರೆ ಎಂದು ತಿಳಿಸಿದ್ದಾರೆ. : --- .