ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ ಚೆನ್ನೈ, ಫೆಬ್ರವರಿ 06, 2021 (..): ಆಸ್ಕರ್​ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಕ್ರಿಸ್ಟೋಫರ್​ ಪ್ಲಮ್ಮರ್​​ ನಿಧನರಾಗಿದ್ದಾರೆ. 91ನೇ ವಯಸ್ಸಿನ ಕ್ರಿಸ್ಟೋಫರ್​ ಪ್ಲಮ್ಮರ್ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಕ್ರಿಸ್ಟೋಫರ್​ ಪ್ಲಮ್ಮರ್​​ 1950ರಲ್ಲಿ ದಿ ರಿವಿಲ್ಸ್​ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. “ದಿ ಸೌಂಡ್​ ಆಫ್​ ಮ್ಯೂಸಿಕ್​” ನಲ್ಲಿನ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೇ ಚಿತ್ರಕ್ಕಾಗಿ ಅವರು ಆಸ್ಕರ್​ ಪ್ರಶಸ್ತಿಗೂ ಭಾಜನರಾಗಿದ್ದರು. ಸುಮಾರು 100 ಚಿತ್ರಗಳಲ್ಲಿ ನಟಿಸಿರುವ ಇವರು ಅಲ್ಲಿನ ದೂರದರ್ಶನ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು.