ಅಕ್ಕಿಪೇಟೆಯ ದರ್ಗಾದಲ್ಲಿ ಅನ್ನದಾನ ಮಾಡಿದ ರಾಗಿಣಿ, ತಿಂಗಳಾಂತ್ಯದಿಂದ ಸಿನಿಮಾ ಕೆಲಸ ಎಂದ ನಟಿ ಬೆಂಗಳೂರು, ಫೆಬ್ರವರಿ 06, 2021 (..): ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಾಗಿಣಿ ದ್ವಿವೇದಿ ಅಕ್ಕಿಪೇಟೆಯ ದರ್ಗಾಕ್ಕೆ ಭೇಟಿ ನೀಡಿ, ಅನ್ನದಾನ ಮಾಡಿದ್ದಾರೆ. ಜತೆಗೆ ‘ಸಿನಿಮಾ ಆಫರ್‌ಗಳು ಸಾಕಷ್ಟಿವೆ. ಈ ತಿಂಗಳ ಅಂತ್ಯದಿಂದ ಮತ್ತೆ ನಟನೆ ಪ್ರಾರಂಭ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ. ‘ನನ್ನ ತಂದೆ, ತಾಯಿ ನೀಡಿದ ಬೆಂಬಲದಿಂದ ನಾನು ಆರಾಮವಾಗಿದ್ದೇನೆ. ನನ್ನ ಕುಟುಂಬ ನನ್ನನ್ನು ಬೆಂಬಲಿಸಿತು ಎಂದು ಹೇಳಿದ್ದಾರೆ. ಈ ತಿಂಗಳ ಅಂತ್ಯದಿಂದಲೇ ಮತ್ತೆ ನಟನೆ ಪ್ರಾರಂಭಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.