‘ಸಲಾರ್’ ಉಗ್ರಂ ಅಥವಾ ಮತ್ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್ ಬೆಂಗಳೂರು, ಫೆಬ್ರವರಿ 06, 2021 (..):ಮುಹೂರ್ತದಿಂದಲೇ ನಿರೀಕ್ಷೆ ಹುಟ್ಟಿಸಿರುವ ‘ಸಲಾರ್’‌ ರಿಮೇಕ್ ಅಥವಾ ಸ್ವಮೇಕ್‌ ಎಂಬುದರ ಕುರಿತು ನಿರ್ದೇಶಕ ಪ್ರಶಾಂತ್‌ ನೀಲ್ ಸ್ಪಷ್ಟನೆ ನೀಡಿದ್ದಾರೆ. ‘ಸಲಾರ್‌’ ಚಿತ್ರ ‘ಉಗ್ರಂ’ ರೀಮೇಕ್‌ ಎಂಬ ಸುದ್ದಿ ಓಡಾಡುತ್ತಿತ್ತು. ಈ ಕುರಿತು ಪ್ರಶಾಂತ್ ನೀಲ್ ಸ್ಪಷ್ಟನೆ ನೀಡಿದ್ದಾರೆ. ಇದು ಯಾವುದೇ ಸಿನಿಮಾದ ರೀಮೇಕ್‌ ಅಲ್ಲ. ಇದು ಪ್ರಭಾಸ್‌ ಅವರನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಕಥೆ ಎಂದಿದ್ದಾರೆ ಕೆಜಿಎಫ್ ಡೈರೆಕ್ಟರ್. ಯಾವುದೇ ಹಾಲಿವುಡ್‌, ಬಾಲಿವುಡ್‌ ಸಿನಿಮಾಗಳ ಪ್ರೇರಣೆಯಿಂದಲೂ ಮಾಡಿರುವ ಸಿನಿಮಾವಲ್ಲ ಇದು ಎಂದು ಸ್ಪಷ್ಟಪಡಿಸಿದ್ದಾರೆ.