ಕಡಿಮೆ-ದರದ, ಪರಿಸರಸ್ನೇಹಿ ಸೊಳ್ಳೆ ಬಲೆ ಆವಿಷ್ಕಾರ ಮಾಡಿದ 9 ವರ್ಷದ ಬಾಲಕಿ…. ಕೇರಳ,ಫೆಬ್ರವರಿ,5,2021(..):ಹೇಳಿ ಕೇಳಿ ಇದು ಕೊರೋನಾ ಕಾಲ. ಡೆಂಗ್ಯೂ, ಚಿಕನ್‌ ಗುನ್ಯ, ಜಿಕಾದಂತಹ ಅನೇಕ ರೋಗ, ಜ್ವರಗಳು ನಮ್ಮನ್ನೀಗಾಗಲೇ ಹಿಂಡಿಹಿಪ್ಪೆ ಮಾಡಿಬಿಟ್ಟಿವೆ. ನಮ್ಮ ಮನೆಗಳಲ್ಲಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು, ಅಂಗಡಿಗಳಲ್ಲಿ ಮಾರಾಟ ಮಾಡುವ ವಿವಿಧ ರೀತಿಯ ದುಬಾರಿ ಸೊಳ್ಳೆ ಬತ್ತಿಗಳನ್ನು ನಾವೆಲ್ಲರೂ ಒಮ್ಮೆಯಾದರೂ ಬಳಸಿಯೇ ಇರುತ್ತೇವೆ, ಹಾಗೂ ಒಮ್ಮೊಮ್ಮೆ ಏನು ಮಾಡಿದರೂ ಸೊಳ್ಳೆಗಳಿಂದ ಮುಕ್ತಿ ದೊರೆಯುವುದಿಲ್ಲ. ಆದರೆ ಇಲ್ಲೊಂದು 9 ವರ್ಷ ಪ್ರಾಯದ ಪುಟ್ಟ ಪೋರಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ಸುಲಭವಾದ ಮಾರ್ಗವನ್ನು ಕಂಡು ಹಿಡಿದಿದ್ದಾಳೆ. ಈಕೆ ಹೆಸರು ಇಂದಿರಾ ಅರ್ಜುನ್. ಕೇವಲ 9 ವರ್ಷ ಪ್ರಾಯದ ಕೇರಳದ ಈ ಬಾಲಕಿ ಅತ್ಯಂತ-ಕಡಿಮೆ ದರದಲ್ಲಿ, ಪರಿಸರ-ಸ್ನೇಹಿ ಸೊಳ್ಳೆಗಳನ್ನು ಸೆರೆಹಿಡಿಯುವ ಬಲೆಯನ್ನು ಆವಿಷ್ಕರಿಸಿದ್ದಾಳೆ. ಬಳಸಿದ ಸ್ಕೂಟರ್ ಅಥವಾ ಕಾರಿನ ಟೈರ್ ಹಾಗೂ ಸುಲಭವಾಗಿ ದೊರೆಯುವ ಇನ್ನಿತರೆ ವಸ್ತುಗಳನ್ನು ಬಳಸಿ, ಡೆಂಗ್ಯು, ಚಿಕುನ್‌ ಗುನ್ಯ, ಜಿಕಾದಂತಹ ಅಪಾಯಕಾರಿ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಸೆರೆ ಹಿಡಿಯುವ ಮಾರ್ಗವನ್ನು ಕಂಡು ಹಿಡಿದಿದ್ದಾಳೆ. ಇದನ್ನು ‘ಒವಿಲಾಂಟ ಸೊಳ್ಳೆ ಬಲೆ’ ಎಂದು ಹೆಸರಿಸಲಾಗಿದೆ. ಬೇಕಾಗಿರುವ ಸಾಮಗ್ರಿಗಳು ಒಂದು ಹಳೆಯ ಬಳಸಿದ ಟೈರ್, ಒಂದು ಬಟ್ಟೆ ನೇತು ಹಾಕುವ ಹ್ಯಾಂಗರ್, ಒಂದಿಚಿನ ಪಿವಿಸಿ ಪೈಪ್, ಸಿಲಿಕಾನ್ ಅಂಟು, ಒಂದು ಬಾಲ್ ವಾಲ್ವ್ (ನಲ್ಲಿ), ಪಿವಿಸಿ ಅಂಟು, ಫಿಲ್ಟರ್ ಕಾಗದ, ೨ ಲೀಟರ್ ನೀರು, ಕತ್ತರಿಸಲು ಒಂದು ಬ್ಲೇಡ್ ಅಥವಾ ಚಾಕು, ಬೂದುಗಾಜು. ತಯಾರಿಸುವ ವಿಧಾನ: ಪರಿಣಾಮ… ಈ ಸೊಳ್ಳೆ ಬಲೆಯನ್ನು ಕೃಷಿ ಜಮೀನುಗಳಲ್ಲಿ ಹಾಗೂ ಇನ್ನಿತರೆ ಹೊರಾಂಗಣ ಪ್ರದೇಶಗಳಲ್ಲಿಯೂ ಬಳಸಬಹುದು. ಇದು ಇದೇ ವಿಧಾನದಿಂದ ತಯಾರಿಸುವ ಇತರೆ ಸೊಳ್ಳೆ ಬಲೆಗಳಿಗಿಂತ ಏಳು ಪಟ್ಟು ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುತ್ತದೆ ಹಾಗೂ ವಿವಿಧ ರೀತಿಯ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಬಳಸಿರುವ ಟೈರ್‌ಗಳನ್ನು ಪುನಃ ಉಪಯೋಗಿಸಿದಂತೆಯೂ ಆಗುತ್ತದೆ. …. 9-- -, - 9-- , - - . , , . . ‘ ’ : , , 1″ , , , , , 2 , , .:• • 1 • 1 • .• • 2 • . • , • () . 2 . .• ()• ( ) .• . .• . ()• . .• , .: . . : 9 - - – -- - - .