ನಾಳೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧ… ಕೊಡಗು,ಫೆಬ್ರವರಿ,5,2021(..):ನಾಳೆ ತಲಕಾವೇರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ತಲಕಾವೇರಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುಟುಂಬದೊಂದಿಗೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ನಾಳೆ ತಲಕಾವೇರಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ದೇವಾಲಯಗಳಿಗೆ ಎರಡು ದಿನವೂ ಸ್ಯಾನಿಟೈಸ್ ಮಾಡಲಾಗುತ್ತದೆ. ಹಾಗೆಯೇ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ನಾಳೆ ಪೂಜೆಗೆ ಅವಕಾಶ ನೀಡಲಾಗಿದೆ. ಇನ್ನು ಈಗಾಗಲೇ ಅರ್ಚಕರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. .. ’ , . 5, 2021 (..): . . ’ , . .: / / : - - – –- –