ಗೆಜೆಟ್ ನೋಟಿಫಿಕೇಷನ್ ಆಗುವವರೆಗೂ ಹೋರಾಟ ಕೈ ಬಿಡಲ್ಲ- ಜಯಮೃತ್ಯುಂಜಯ ಸ್ವಾಮೀಜಿ… ಚಿತ್ರದುರ್ಗ,ಫೆಬ್ರವರಿ,4,2021(..):ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಈ ಮಧ್ಯೆ ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ವೇಳೆ ಮಾತನಾಡಿರುವ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಸಚಿವರ ನೇತೃತ್ವದಲ್ಲಿ ಇಂದು ಸಂಧಾನಕ್ಕೆ ಬರುತ್ತಿದ್ದಾರೆ. ಆದರೆ ಗೆಜೆಟ್ ನೋಟಿಫಿಕೇಷನ್ ಆಗುವವರೆಗೂ ಹೋರಾಟ ಕೈ ಬಿಡಲ್ಲ ಎಂದು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲದಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೇರೆ ಸಮುದಾಯದ ಶ್ರೀಗಳಂತೆ ಶಾಸಕರ ರಾಜೀನಾಮೆಗೆ ಒತ್ತಾಯಿಸಲ್ಲ. ನೀವು ಸಿಎಂ ಬಿಎಸ್ ವೈ ರಾಜೀನಾಮೆ ನೀಡುವಂತೆ ಮಾಡಿ ಎಂದು ಸಮುದಾಯದ ಶಾಸಕರಿಗೆ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು. … ’ – , . 4, 2021 (..): 2A . , “ ’ .”“ . ’ . .. ,” .: / / 2A : -2A - - - .