ಟ್ವಿಟ್ಟರ್’ನಲ್ಲಿ ಕಂಗನಾಗೆ ಟಾಂಗ್ ಕೊಟ್ಟ ರಮ್ಯಾ ಬೆಂಗಳೂರು, ಫೆ04, 2021 (..):ಕಂಗನಾ ರನಾವತ್ ಟ್ವೀಟ್ ಗೆ ನಟಿ, ಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಟ್ವೀಟ್ ಮಾಡಿರುವ ಪಾಪ್ ಗಾಯಕಿ ರಿಹಾನೆ ವಿರುದ್ಧ ಕಂಗನಾ ಕಿಡಿ ಕಾರಿದ್ದರು. ಇದಕ್ಕೆ ರಮ್ಯಾ ತಿರುಗೇಟು ನೀಡಿದ್ದಾರೆ. ಕಂಗನಾ ಟ್ವೀಟ್ ಗೆ ಸಂಬಂಧಿಸಿದಂತೆ ‘ ನಮ್ಮ ಪ್ರಧಾನಿ ದುರ್ಬಲರು ಎಂದು ಒಪ್ಪಿಕೊಂಡಿರಾ? ಎಂದು ವ್ಯಂಗ್ಯ ಮಾಡಿದ್ದಾರೆ. ಅಂದಹಾಗೆ ಕಂಗನಾ, ‘ ರಿಹಾನೆಗೆ ತಿರುಗೇಟು ನೀಡಿದ್ದರು. ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದರೆ, ಇವರ್ಯಾರೂ ರೈತರಲ್ಲ, ಇವರೆಲ್ಲಾ ಭಾರತವನ್ನು ಇಬ್ಭಾಗ ಮಾಡಲು ನೋಡುತ್ತಿರುವ ಭಯೋತ್ಪಾದಕರು’ ಎಂದಿದ್ದರು.