ಫೆಬ್ರವರಿ 21ರಂದು “ಪರ್ವ ವಿರಾಟ್ ದರ್ಶನ” ಹೆಸರಿನಲ್ಲಿ ವಿಚಾರ ಸಂಕಿರಣ ಮೈಸೂರು,ಜನವರಿ,03,2021(..) :ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಹಾಗೂ ಮೈಸೂರು ರಂಗಾಯಣ ಸಹಯೋಗದಲ್ಲಿ ಫೆಬ್ರವರಿ 21ರ ಭಾನುವರದಂದು “ಪರ್ವ ವಿರಾಟ್ ದರ್ಶನ” ಹೆಸರಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ರಂಗಾಯಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಚಾರ ಸಂಕಿರಣ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾಹಿತಿ ನೀಡಿದರು. ನಗರದ ಕಲಾಮಂದಿರದಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಜಿ.ಎಲ್.ಶೇಖರ್ ಉದ್ಘಾಟಿಸುವರು ಎಂದರು. ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್.ಗಣೇಶ್ ಅವರು ಉಪನ್ಯಾಸ ನೀಡಲಿದ್ದರೆ. ವಿಚಾರ ಸಂಕಿರಣದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಪರ್ವ ನಾಟಕ ನಿರ್ದೇಶಕ ಪ್ರಕಾಶ್ ಬೆಳವಾಡಿ ಉಪಸ್ಥಿತರಿರುವರು ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು. : 21st-- --