ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್: ನ್ಯೂಜಿಲೆಂಡ್ ಫೈನಲ್ಸ್’ಗೆ ಬೆಂಗಳೂರು, ಫೆಬ್ರವರಿ 03, 2021 (..):ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೇರಿದೆ. ಆಸ್ಟ್ರೇಲಿಯಾ ದ.ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಂದೂಡಿದ ಬೆನ್ನಲ್ಲೇ ನ್ಯೂಜಿಲೆಂಡ್ ಫೈನಲ್ ಗೇರಿದೆ. ಉಳಿದೊಂದು ಸ್ಥಾನಕ್ಕಾಗಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಪೈಪೋಟಿ ನಡೆಸಲಿದೆ. ಶುಕ್ರವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದರೆ ಆ ಸ್ಥಾನ ಭಾರತದ ಪಾಲಾಗಲಿದೆ. ಈ ಸರಣಿಯ ಫಲಿತಾಂಶ ಭಾರತ-ಇಂಗ್ಲೆಂಡ್ ಮಾತ್ರವಲ್ಲದೆ, ಆಸ್ಟ್ರೇಲಿಯಾಕ್ಕೂ ಮುಖ್ಯವಾಗಲಿದೆ.