ಎಸಿಬಿ ದಾಳಿ: ಎಸಿಎಫ್ ಶ್ರೀನಿವಾಸ್ ನಿವಾಸದಲ್ಲಿ ಚಿನ್ನ, ಬೆಳ್ಳಿ, ನಗದು ಪತ್ತೆ…. ಚಿತ್ರದುರ್ಗ,ಫೆಬ್ರವರಿ,2,2021(..):ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಇಂದು ರಾಜ್ಯದ ಹಲವು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಈ ನಡುವೆ ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಎಸ್‌.ಶ್ರೀನಿವಾಸ್‌ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿನ್ನಾಭರಣ, ಬೆಳ್ಳಿ, ನಗದು ಪತ್ತೆಯಾಗಿದೆ. ದಾಳಿಯ ಸಂದರ್ಭದಲ್ಲಿ 870 ಗ್ರಾಂ ತೂಕದ ಚಿನ್ನಾಭರಣ, ಎರಡೂವರೆ ಕೆ.ಜಿ ಬೆಳ್ಳಿ ಹಾಗೂ ರೂ. 4.7 ಲಕ್ಷ ನಗದು ಸಿಕ್ಕಿದೆ. ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತು, ಎರಡು ಕಾರು, ಟ್ರ್ಯಾಕ್ಟರ್‌ ಮತ್ತು ದಾಖಲೆ ಪತ್ರಗಳನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. : - - - – - -