ಏರ್ ಶೋ 2021 ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ: ಭಾರತೀಯ ಸೇನಾಶಕ್ತಿ ಅನಾವರಣ… ಬೆಂಗಳೂರು,ಫೆಬ್ರವರಿ,3,2021(..):ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುತ್ತಿರುವ ಏರ್ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ- 2021 ಧ್ವಜ ಹೊತ್ತು ಎಲ್​ಯುಎಚ್ ಹೆಲಿಕಾಪ್ಟರ್​ಗಳು ಚಾಲನೆಗೊಂಡಿದ್ದು, ಸ್ವದೇಶಿ ಜತೆಗೆ ವಿದೇಶಿ ವಿಮಾನಗಳ ಹಾರಾಟವೂ ಏರ್ ಶೋ ನಲ್ಲಿ ನಡೆಯಲಿವೆ. ಇಂದಿನಿಂದ ಲೋಹದ ಹಕ್ಕಿಗಳ ಕಲರವ, ಭಾರತೀಯ ಸೇನಾಶಕ್ತಿ ಅನಾವರಣಗೊಳ್ಳಲಿದೆ. ರಫೆಲ್ ಈ ಬಾರಿ ಏರ್ ಶೋನ ಪ್ರಮುಖ ಆಕರ್ಷಣೆಯಾಗಲಿದೆ. ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 16 ದೇಶಗಳ 63 ವಿಮಾನಗಳು ಹಾರಾಟ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ 3 ಸಾವಿರ ಜನರಿಗೆ ಏರ್ ಶೋ ವೀಕ್ಷಿಸಲು ಆಗಮಿಸಲು ಅವಕಾಶ ನೀಡಲಾಗಿದೆ. … 2021: , . 3, 2021 (..): - . -2021 . , . . 42 . 63 . .: / / / : - 2021-