ಕೀ ಆನ್ಸರ್ ಸೋರಿಕೆಯಿಂದ ಮುಂದೂಡಿಕೆಯಾಗಿದ್ಧ ‘ಎಫ್ ಡಿಎ ಪರೀಕ್ಷೆಗೆ’ ದಿನಾಂಕ ಮರು ನಿಗದಿ… ಬೆಂಗಳೂರು,ಫೆಬ್ರವರಿ,2,2021(..):ಕೀ ಆನ್ಸರ್ ಸೋರಿಕೆಯಿಂದಾಗಿ ಮುಂದೂಡಿಕೆಯಾಗಿದ್ದ ಪ್ರಥಮ ದರ್ಜೆ ಸಹಾಯಕ(ಎಫ್ ಡಿಎ) ಪರೀಕ್ಷೆಗೆ ದಿನಾಂಕವನ್ನ ಮರುನಿಗದಿ ಮಾಡಲಾಗಿದೆ. ಫೆಬ್ರವರಿ 28 ರಂದು ಎಫ್ ಡಿಎ ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾಂಕ ಮರು ನಿಗದಿ ಮಾಡಿ ಕೆಪಿಎಸ್ ಸಿ ಕಾರ್ಯದರ್ಶಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 24 ರಂದು ನಿಗದಿಯಾಗಿದ್ದ ಎಫ್ ಡಿಎ ಪರೀಕ್ಷೆ ಕೀ ಅನ್ಸರ್ ಸೋರಿಕೆಯಿಂದಾಗಿ ಮುಂದೂಡಿಕೆಯಾಗಿತ್ತು. ಎಫ್ ಡಿಎ ಪರೀಕ್ಷೆ ನಡೆಯುವ ಮುನ್ನವೇ ಕೀ ಅನ್ಸರ್ ಸೋರಿಕೆಯಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಹಲವು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. … , . 2, 2021 (..): () , , . , 28. . . , 24. . .: / / 28/ : - –- - .