“ಎಂ.ಟಿ.ವಿ.ಆಚಾರ್ಯ ಅವರ ಜನ್ಮಶತಾಬ್ಧಿ, ಕಲಾಕೃತಿಗಳ ಪ್ರದರ್ಶನ” : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟನೆ ಮೈಸೂರು,ಜನವರಿ,31,2021(..) :ಮೈಸೂರು ಆರ್ಟ್ ಗ್ಯಾಲರಿ, ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ವತಿಯಿಂದ ಮೃಗಾಲಯದ ಎದುರಿನ ರಾಮ್ ಸನ್ಸ್ ನಲ್ಲಿ ಆಯೋಜಿಸಿದ್ದ ಎಂ.ಟಿ.ವಿ.ಆಚಾರ್ಯರ ಕಲಾಕೃತಿಗಳ ಪ್ರದರ್ಶನವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಅಂಚೆಕಲಾ ಶಿಕ್ಷಣ ರೂಪಿಸಿದ ಎಂ.ಟಿ.ವಿ.ಆಚಾರ್ಯ ಅವರ ಜನ್ಮಶತಾಬ್ಧಿ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿ.ಎಂ.ಟಿ.ವಿ.ಆಚಾರ್ಯರ ಹಿರಿಯ ಶಿಷ್ಯ ಎಲ್.ಶಿವಲಿಂಗಪ್ಪ, ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್ ಅಧ್ಯಕ್ಷತೆವಹಿಸಿದ್ದರು. ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಅಧ್ಯಕ್ಷ ಆರ್.ಅಜಯ್ ಕುಮಾರ್ ಸಿಂಗ್, ಮೈಸೂರು ಆರ್ಟ್ ಗ್ಯಾಲರಿ ಕಾರ್ಯದರ್ಶಿ ಡಾ.ಜಮುನಾರಾಣಿ ಮಿರ್ಲೆ ಇತರರು ಇದ್ದರು. : ---- - . -