“ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ” : ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಮೈಸೂರು,ಜನವರಿ,31,2021(..) : ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ನಮಗೆ ಯಾವುದೆ ಆಸೆ ಇಲ್ಲ. ನನಗೆ ಜೀವನ ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ‌ ಯಾವುದನ್ನು ನಿರೀಕ್ಷೆ ಮಾಡಿಲ್ಲ. ನಾನು ಸೋತಾಗಲೂ ಪಕ್ಷ ನನ್ನ‌ ಕೈ ಬಿಟ್ಟಿಲ್ಲ. ನಾನು ಸೋತೆ ಅಂತ ಕೆಲಸ‌ ಮಾಡುವುದನ್ನೂ ಬಿಟ್ಟಿಲ್ಲ. ನಾನು ಸದಾ ಜನರ ಜೊತೆ ಇದ್ದೇನೆ. ನಾನು ಯಾವುದಕ್ಕೂ ಆಸೆ ಪಡಲ್ಲ ಎಂದು ತಿಳಿಸಿದ್ದಾರೆ. : ---- -- - -