ತೆಲುಗಿನಲ್ಲಿ ದರ್ಶನ್ ಸಿನಿಮಾ ‘ರಾಬರ್ಟ್’ ಬಿಡುಗಡೆಗಿದ್ದ ಅಡೆತಡೆ ನಿವಾರಣೆ ಬೆಂಗಳೂರು, 31, 2021 (..):ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಾಬರ್ಟ್ ತೆಲುಗಿನಲ್ಲಿ ರಿಲೀಸ್ ಆಗಲು ಇದ್ದ ಸಮಸ್ಯೆ ನಿವಾರಣೆಯಾಗಿದೆ. ಹೌದು. ರಾಬರ್ಟ್ ಗೆ ತೆಲುಗಿನಲ್ಲಿ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ. ಹೀಗಾಗಿ ಮಾರ್ಚ್ 11ರಂದೇ ಎರಡು ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೇ ಸುಮಾರು 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸ್ಥಳೀಯರ ಸಿನಿಮಾಗಳ ನಡುವೆ ನಿಮ್ಮ ಸಿನಿಮಾ ರಿಲೀಸ್ ಮಾಡಲು ಆಗಲ್ಲ ಎಂದಿದ್ದರು. ಈ ಕಾರಣ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಫಿಲ್ಮ್ ಚೇಂಬರ್ ಗೆ ದೂರು ಸಹ ನೀಡಿದ್ದರು.