ಫೆ.1 ರಂದು ಮಡಿವಾಳ ಮಾಚಿದೇವ ಜಯಂತಿ: ಸಿಎಂ ಬಿಎಸ್ ವೈ ರಿಂದ ಉದ್ಘಾಟನೆ: ಭಾಗಿಯಾಗಲಿರುವ ಕೇಂದ್ರ ಸಚಿವರು… ಬೆಂಗಳೂರು,ಜನವರಿ,30,2021(..):ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆಬ್ರವರಿ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಡಿವಾಳ ಮಾಚಿದೇವ ಜಯಂತಿ’ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀಗಳಾದ ಬಸವ ಮಾಚೀದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಫೆಬ್ರವರಿ 1ರ ಸೋಮವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಶಾಸಕ ಉದಯ್ ಬಿ ಗರುಡಾಚಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ, ಮುಖ್ಯ ಅತಿಥಿಗಳಾಗಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಲಕ್ಷ್ಮಣ್ ಸವದಿ, ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್,ವಿ.ಸೋಮಣ್ಣ, ಎಸ್.ಟಿ ಸೋಮಶೇಖರ್, ಎಂಟಿಬಿ ನಾಘರಾಜ್, ಗೋಪಾಲಯ್ಯ, ಭಯರತಿ ಬಸವರಾಜ್ , ರಾಜ್ಯಸಭೆ ಸದಸ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೇರಿ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀ ರಾಜು ಎಮ್ಮಿಗನೂರು ಮತ್ತು ತಂಡ ಬೆಂಗಳೂರು ಇವರಿಂದ ವಚನ ಗಾಯನ ನೆರವೇರಲಿದೆ. : - – 1- -