ಕೃತಜ್ಞತೆ ಇರುವುದರಿಂದಲೇ ಎಂಎಲ್‌ ಸಿ ಮಾಡಿರೋದು-‌ಹೆಚ್.ವಿಶ್ವನಾಥ್ ಗೆ ಶಾಸಕ ಎಲ್.ನಾಗೇಂದ್ರ ಟಾಂಗ್… ಮೈಸೂರು,ಜನವರಿ,30,2021(..):ಮಂತ್ರಿ ಸ್ಥಾನದಿಂದ ವಂಚಿತರಾದ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.;ವಿಶ್ವನಾಥ್ ಗೆ ಶಾಸಕ ಎಲ್. ನಾಗೇಂದ್ರ ಟಾಂಗ್ ನೀಡಿದ್ದಾರೆ. ಹೆಚ್.ವಿಶ್ವನಾಥ್ ಬಿಜೆಪಿ ಸಿದ್ದಾಂತ ಅರಿತು ನಡೆಯುವುದು ಒಳಿತು. ಕೃತಜ್ಞತೆ ಇರುವುದರಿಂದಲೇ ಎಂಎಲ್‌ಸಿ ಮಾಡಿರೋದು‌ ಎಂದು ಹೇಳುವ ಮೂಲಕ ಹೆಚ್.ವಿಶ್ವನಾಥ್‌ ಗೆ ಬಿಜೆಪಿ ಶಾಸಕ ಎಲ್.ನಾಗೇಂದ್ರ ಟಾಂಗ್ ನೀಡಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಲ್.ನಾಗೇಂದ್ರ, ಬಿಜೆಪಿಗೆ ಬಂದ 17 ಮಂದಿಯಲ್ಲಿ ಎಲ್ಲರೂ ಪಕ್ಷದ ಸಿದ್ದಾಂತದ ನಡೆಯುತ್ತಿದ್ದಾರೆ. ವಿಶ್ವನಾಥ್‌‌ ರವರು ತಾಳ್ಮೆ ವಹಿಸೋದು ಒಳಿತು. ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡಲು ಯಾರ ವಿರೋಧವೂ ಇಲ್ಲ. ಅನಾವಶ್ಯಕವಾಗಿ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳು ತರವಲ್ಲ ಎಂದು ತಿಳಿಸಿದರು. ಪರಿಷತ್ ಮೈತ್ರಿಯಂತೆ ಪಾಲಿಕೆಯಲ್ಲೂ ಹೊಂದಾಣಿಕೆ ಸಾಧ್ಯತೆ… ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಎಲ್ ನಾಗೇಂದ್ರ, ಪರಿಷತ್ ಮೈತ್ರಿಯಂತೆ ಪಾಲಿಕೆಯಲ್ಲೂ ಹೊಂದಾಣಿಕೆ ಸಾಧ್ಯತೆ ಇದೆ. ಈ ಬಾರಿ ಬಿಜೆಪಿ ಮೇಯರ್ ಸ್ಥಾನ ಪಡೆಯಲಿದೆ. ಕಡಿಮೆ ಸದಸ್ಯರಿದ್ದರೂ ಪರಿಷತ್‌ನಲ್ಲಿ ಸಭಾಪತಿ ಸ್ಥಾನ ಬಿಟ್ಟು ಕೊಟ್ಟಿದ್ದೇವೆ. ಆದ್ರೆ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ ಬಿಜೆಪಿ ಮೇಯರ್ ಹುದ್ದೆ ಪಡೆಯಬೇಕೆಂಬುದು ಬಹಳ ದಿನಗಳ ಬಯಕೆ ಎಂದರು. ಪಾಲಿಕೆ ಚುನಾವಣೆ ಮೇಲೆ ಬಣ ರಾಜಕೀಯ ಪರಿಣಾಮ ಬೀರದು ಜೆಡಿಎಸ್‌ನಲ್ಲಿ ಸಾ.ರಾ.ಮಹೇಶ್ ಜಿಟಿಡಿ ಬಣ ರಾಜಕೀಯ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಎಲ್.ನಾಗೇಂದ್ರ, ಪಾಲಿಕೆ ಚುನಾವಣೆ ಮೇಲೆ ಬಣ ರಾಜಕೀಯ ಪರಿಣಾಮ ಬೀರದು. ಮೇಲ್ಮಟ್ಟದಲ್ಲಿ ಹೊಂದಾಣಿಕೆ‌ ಮಾಡಿಕೊಂಡ್ರೆ ಇವರು ಕೇಳಲೇಬೇಕು. ಮೀಸಲಾತಿ ಪ್ರಕಟವಾದ ಬಳಿಕ ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದರು. ಮೈಸೂರು ಉಸ್ತುವಾರಿ ಸಚಿವ ಸ್ಥಾನ ಬದಲಾಗಲ್ಲ. ಎಸ್.ಟಿ.ಸೋಮಶೇಖರ್‌ ರವರೇ ಮುಂದುವರೆಯಲಿದ್ದಾರೆ. ಬದಲಾವಣೆ ಮಾಡುವುದಿದ್ರೆ ಇಷ್ಟೊತ್ತಿಗೆ ಮಾಡ್ಬೇಕಿತ್ತು. ಅವರು ಎಲ್ಲರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಎಲ್.ನಾಗೇಂದ್ರ ತಿಳಿಸಿದರು. : - .- – . -