ಮಹದಾಯಿ ವಿಚಾರದಲ್ಲಿ ಪಕ್ಷದ ಮಾತು ಕೇಳಿ ರಾಜಿಯಾಗಲ್ಲ- ತನ್ನ ಪಕ್ಷದ ವಿರುದ್ಧವೇ ಗೋವಾ ಸಿಎಂ ಗುಟುರು… ಗೋವಾ,ಜನವರಿ,30,2021(..):ಮಹಾರಾಷ್ಟ್ರ ಗಡಿ ಖ್ಯಾತೆ ಬಳಿಕ ಇದೀಗ ಮಹಾದಾಯಿ ವಿಚಾರದಲ್ಲಿ ಗೋವಾ ಖ್ಯಾತೆ ತೆಗೆದಿದೆ. ಹೌದು, ಮಹಾದಾಯಿ ವಿಚಾರದಲ್ಲಿ ಪಕ್ಷದ ಮಾತು ಕೇಳಿ ರಾಜಿಯಾಗುವ ಮಾತೇ ಇಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ಧಾರೆ. ಗೋವಾ ವಿಧಾನಸಭಾ ಕಲಾಪದಲ್ಲಿ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮಹಾದಾಯಿ ಗೋವಾ ಜೀವನದಿ. ನನಗೆ ತಾಯಿ ಸಮಾನ. ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ನಮ್ಮ ಬಿಜೆಪಿ ಸರ್ಕಾರವಿದೆ. ಆದರೆ ನಾನು ಪಕ್ಷ ರಾಜಕೀಯ ಬದಿಗಿಟ್ಟು ಮಹಾದಾಯಿ ನೋಡುವೆ. ಈ ವಿಚಾರದಲ್ಲಿ ಪಕ್ಷದ ಮಾತು ಕೇಳಿ ರಾಜಿಯಾಗುವ ಮಾತೇ ಇಲ್ಲ ಎಂದು ತಮ್ಮ ಪಕ್ಷದ ವಿರುದ್ಧವೇ ಗುಟುರು ಹಾಕಿದ್ದಾರೆ. ಹಾಗೆಯೇ ಮಹಾದಾಯಿ ವಿಚಾರದಲ್ಲಿ ಯಾರ ಜೊತೆಯೋ ರಾಜಿಯಾಗುವುದಿಲ್ಲ. ಪಕ್ಷದಲ್ಲಿ ಯಾರೇ ಒತ್ತಡ ತಂದರೂ ಅದನ್ನ ನಾನು ಒಪ್ಪುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. … ’ : , . 30, 2021 (..): , . , ’ . , , “ , . , , . . ’ .” ’ , .: / / ’ : –- - - –