ಬಿಗ್ ಬಜೆಟ್ ‘ರಾಮಾಯಣ’ದಲ್ಲಿ ಹೃತಿಕ್ ಶ್ರೀರಾಮ, ದೀಪಿಕಾ ಸೀತೆ ! ಬೆಂಗಳೂರು, ಜನವರಿ 30, 2020 (..):ಬಾಲಿವುಡ್’ನ ಬಿಗ್ ಬಜೆಟ್ ರಾಮಾಯಣದಲ್ಲಿ ಶ್ರೀರಾಮನ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್ ಸಿನಿಮಾವನ್ನು ನಿರ್ಮಾಪಕ ಮಧು ಮಂತೇನಾ ನಿರ್ಮಿಸುತ್ತಿದ್ದು. 300 ಕೋಟಿ ರೂಪಾಯಿಗಳ ಬಜೆಟ್ ನ ಈ ಸಿನಿಮಾವನ್ನು 3 ಡಿ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಹೃತಿಕ್ ನಟನೆಯ ರಾಮಾಯಣದಲ್ಲಿ ಸೀತೆಯಾಗಿ ನಟಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಲಾಗಿದೆ. ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸಲಿದ್ದಾರೆ. ರಾಮಾಯಣದ ಪ್ರತಿ ಮುಖ್ಯ ವಿಷಯವನ್ನೂ ಸಿನಿಮಾದಲ್ಲಿ ತೋರಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.