ರಾಜ್ಯ ಖಾಸಗಿ ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ-ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬೆಂಗಳೂರು,ಜನವರಿ,29,2021(..): ಶಾಲಾ ಫೀಸ್ ಕಡಿತಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಖಾಸಗಿ ಶಾಲೆಗಳು 2019ರಲ್ಲಿ ಪಡೆದ ಬೋಧನಾ ಶುಲ್ಕದ ಶೇ.70ರಷ್ಟು ಮಾತ್ರ ಪಡೆಯಬೇಕು. ಬೋಧನಾ ಶುಲ್ಕ ಹೊರತುಪಡಿಸಿ ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, 2019ರ ಬೋಧನಾ ಶುಲ್ಕದ ಶೇ.70ರಷ್ಟು ಶುಲ್ಕ ಪಡೆಯಬೇಕು.2020-21ನೇಶೈಕ್ಷಣಿಕಸಾಲಿನಲ್ಲಿಶೇ.70ಕ್ಕಿಂತಹೆಚ್ಚಿನಶುಲ್ಕಪಡೆದಿದ್ದಲ್ಲಿ2021-22ನೇಸಾಲಿನಲ್ಲಿಪಾವತಿಸಬೇಕಾದಶುಲ್ಕಕ್ಕೆಹೊಂದಾಣಿಕೆಯನ್ನುಮಾಡಿಕೊಳ್ಳಬಹುದು.ಯಾವುದೇಶಿಕ್ಷಣಸಂಸ್ಥೆಶೇ.70ಕ್ಕಿಂತಕಡಿಮೆಶುಲ್ಕವನ್ನುವಿಧಿಸಲುಇಚ್ಛಿಸಿದಲ್ಲಿ,ಸಂಪೂರ್ಣಸ್ವಾತಂತ್ರ್ಯವನ್ನುಹೊಂದಿರುತ್ತಾರೆಎಂದುಹೇಳಿದರು. ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿಲ್ಲ. ಒಂದು ವರ್ಷದ ಹಿಂದೆ ಇದ್ದ ಆರ್ಥಿಕ ಪರಿಸ್ಥಿತಿ ಈಗ ಇಲ್ಲ. ಸಮಾಜದ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಕೋವಿಡ್ ನಿಂದಾಗಿ ಎಲ್ಲರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಶಾಲೆಯಲ್ಲಿ ಶಿಕ್ಷಕರಿಗೆ ವೇತನ ನೀಡಲಾಗುತ್ತಿಲ್ಲ. ಪೋಷಕರು ಶುಲ್ಕ ಪಾವತಿಸಲಾಗದ ಸ್ಥಿತಿಯಲ್ಲಿದ್ದಾರೆ. ಪೋಷಕರು ಶಾಲೆ ನಡೆದಿಲ್ಲ ಅಂತಾರೆ,. ಶಾಲೆಗಳು ಶಿಕ್ಷಕರಿಗೆ ಹೇಗೆ ಸಂಬಳ ಕೊಡಲಿ ಅಂತಾರೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.ಶಾಲೆಗೆ ದಾಖಲಾಗುವ ಒಂದು ಕಂತಿನ ಶುಲ್ಕ ಪಾವತಿಸಲಾಗಿದೆ. ಎರಡನೇ ಕಂತಿನ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈ ವರ್ಷ ಯಾವ ಶಾಲೆಯು ಶುಲ್ಕ ಹೆಚ್ಚಳ ಮಾಡಬಾರದು ಎಂದು ಹೇಳಿದ್ದಾರೆ. : ----’ --.