: ಯುವರಾಜ ಕಾಲೇಜು ; ನಾಲ್ಕು ವರ್ಷಗಳ . ಕೋರ್ಸ್ ಆರಂಭಕ್ಕೆ ಗ್ರೀನ್ ಸಿಗ್ನಲ್. ಮೈಸೂರು, ಜ.29, 2021 : (..) : ಪ್ರಸ್ತಕ್ತ ಶೈಕ್ಷಣಿಕ ಸಾಲಿನಿಂದ ಮೈಸೂರು ಯುವರಾಜ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಬಿಎಸ್ಸಿ ಎಡ್ ( ) ಕೋರ್ಸ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಮೈಸೂರು ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಈ ವಿಷಯವನ್ನು ಪ್ರಕಟಿಸಿದರು. ಈ ಸಂಬಂಧ ಯುವರಾಜ ಕಾಲೇಜಿಗೆ ಬಿಎಸ್ಸಿ ಇಡಿ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾನ್ಯತೆ ನೀಡಿರುವ ಎನ್.ಸಿ.ಟಿ.ಇ , ನಾಲ್ಕು ವರ್ಷಗಳ ಕೋರ್ಸ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 50 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸಮ್ಮತಿಸಿದೆ . ಇದು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ. ಅಂದರೆ, ಜೂನ್ –ಜುಲೈ ಪ್ರವೇಶಾತಿಯಿಂದಲೇ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಇಡಿ ಕೋರ್ಸ್ ಆರಂಭವಾಗಲಿದೆ ಎಂದು ಕುಲಪತಿಗಳು ಸಿಂಡಿಕೇಟ್ ಸಭೆಗೆ ಮಾಹಿತಿ ನೀಡಿದರು. 101ನೇ ಘಟಿಕೋತ್ಸವ : ಪ್ರತಿಷ್ಠಿತ ಮೈಸೂರು ವಿವಿಯ 101 ನೇ ಘಟಿಕೋತ್ಸವ ಸಮಾರಂಭ ಈ ವರ್ಷದ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. : -----101--.